ನನ್ನಪ್ಪ

>> Sunday, March 15, 2009

ನನ್ನಪ್ಪ
ಬಿಲ್ ಗೇಟ್ಸ್ ಅಲ್ಲ; ಅವನಪ್ಪನ ಹಾಗೆ!
ಸಾದಾ ಮನುಷ್ಯ.

ನನ್ನಪ್ಪ,
ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ
ಡಾಕ್ಟರ್, ಆಫೀಸರ್.. ಏನೂ ಅಲ್ಲ
ಆದ್ದರಿಂದಲೇ...
ಮಗುವಾಗಿದ್ದಾಗ
ಅಪ್ಪನ ಹೆಗಲಲ್ಲಿ ಕೂತು
ಊರು ಸುತ್ತುವ ಸೌಭಾಗ್ಯ ತಪ್ಪಲಿಲ್ಲ!

ನಾನು ಸಣ್ಣವನಿದ್ದಾಗ,
ಕೆಸರುಗದ್ದೆಯಲ್ಲಿ ಆಡಿ ಬಂದಾಗ,
ಚಿಣ್ಣಿದಾಂಡು ಹಿಡಿದು ನಿಂತಾಗ,
ಅನುದಿನವೂ ಬ್ಯಾಟ್ ಬೀಸಿದಾಗ,
ಮನೆಯ ಗೋಡೆಗೆ ಚೆಂಡು ಎಸೆದಾಗ,
'ರಾಜು' ನಾಯಿ ಜೊತೆ ಹೊದ್ದು ಮಲಗಿದಾಗ
ಗದರಲಿಲ್ಲ, ಬಡಿಯಲಿಲ್ಲ
ನನ್ನಪ್ಪ,
ನನ್ನ ಬಾಲ್ಯ ಕಸಿಯಲಿಲ್ಲ!

ನನ್ನಪ್ಪ,
ಹಣ ಮಾಡುವ ಕಲೆ ಕಲಿಸಲಿಲ್ಲ
ಏಕೆಂದರೆ...
ಅವನಿಗೇ ಹಣ ಮಾಡುವುದು ಗೊತ್ತಿಲ್ಲ!
ಆದರೆ...
ಮಮತೆ-ವಾತ್ಸಲ್ಯಗಳನ್ನು ತುಂಬಿದ
ಪ್ರೀತಿಸುವುದನ್ನು ಕಲಿಸಿದ
ಅಪ್ಪ ನನ್ನನ್ನು
ಮನುಷ್ಯನನ್ನಾಗಿಸಿದ!

ನನ್ನಪ್ಪ,
ಸಾಮಾನ್ಯ ಕೃಷಿಕ.
ಹಾಗಂತ...
ಅಪ್ಪನ ಕೈ ಖಾಲಿಯಲ್ಲ.
ತೋಟದಿಂದ ಬರುವಾಗಲೂ ಹಣ್ಣು
ಪೇಟೆಯಿಂದ ಬರುವಾಗಲೂ ಹಣ್ಣು!
ಅಪ್ಪನ ಪ್ರೀತಿಯೇ ಹಾಗೆ
ಸಾಲ ಮಾಡಿಯಾದರೂ ಸರಿ;
ಮಗನನ್ನು ಖುಷಿಪಡಿಸುವ ಹಾಗೆ!

ಮಗ ದೊಡ್ಡವನಾದರೂ
ಅಪ್ಪನ ಪ್ರೀತಿ ಕಿರಿದಾಗಲಿಲ್ಲ.
ಮಗ ಮನೆಗೆ ಬಂದ ತಕ್ಷಣ
ಬಾದಾಮಿ ಬೀಜ, ಒಣದ್ರಾಕ್ಷಿ, ಕಿತ್ತಳೆ, ದಾಳಿಂಬೆ...
ಯಾವುದೂ ತಪ್ಪುವುದಿಲ್ಲ!

ಅಪ್ಪನಿಗೆ ಮಗ
ಈಗಲೂ ಸಣ್ಣವನೇ.
ಹೌದು...
ಇಂಥಾ ಅಪ್ಪನ ಮುಂದೆ
ಈ ಮಗ
ಯಾವಾಗಲೂ ಸಣ್ಣವನೇ!!

8 ಕಾಮೆಂಟ್‌(ಗಳು):

Manorama B.N March 18, 2009 at 7:36 AM  

laikiddu punyatma..olleya kayaka madtaidde. munduvaresu.... saadya adre bhramarigu bare. namage yakshaganada kathego kooda beku.. ata?

spiworld.com March 19, 2009 at 4:26 AM  

gurugale...
nimmappanannu heegella hogaluva kaarubaaru yaake...!
nimagoo ragavendra yaddyurappanindha MP seat padedhanthe, enadharoo bekagidheyo.....!!

ekanasu March 19, 2009 at 11:12 PM  

realy g8 rakesh. Appana magana samvedane superb agi baindu

Akshay A R March 20, 2009 at 12:05 AM  

super aagi baradde neenu...keep it up...cousin baggeyoo ondu padya bare...:-)

savi March 24, 2009 at 1:02 AM  

appana kavana sakhattagide
last para nenapalli ulidu kaduttade. very nice

ರಾಕೇಶ್ ಕುಮಾರ್ ಕಮ್ಮಜೆ March 28, 2009 at 12:14 AM  

ಮನೋರಮ, ಶ್ರೀನಿವಾಸ್, ಈ ಕನಸು,ಅಕ್ಷಯ್ ಮತ್ತು ಸವಿಯವರಿಗೆಲ್ಲಾ ಧನ್ಯವಾದಗಳು.

ಪ್ರವೀಣ ಚಂದ್ರ April 14, 2009 at 11:27 AM  

chenagide

Naveen kumar G December 9, 2015 at 4:05 AM  

Good One sir..