ಜೋಕುಮಾರನ ತೊಟ್ಟಿಲು

>> Tuesday, March 31, 2009

೧) ಟೀಚರ್ ಗುಂಡನಿಗೆ ಚೆನ್ನಾಗಿ ಹೊಡೀತಾ ಇದ್ರು.
ಅಲ್ಲೆ ಬರುತ್ತಿದ್ದ ಪ್ರಿನ್ಸಿಪಾಲ್ : "ಯಾಕ್ರೀ ಅವ್ನಿಗೆ ಹೊಡೀತಾ ಇದ್ದೀರಾ?
ಟೀಚರ್: ಸರ್ ಗಾಂಧಿ ಬಗ್ಗೆ ಪ್ರಬಂಧ ಬರಿ ಅಂದ್ರೆ ಪೂಜಾ ಗಾಂಧಿ ಬಗ್ಗೆ ಬರ್ದಿದ್ದಾನೆ ಸಾರ್!

೨) ಪ್ರಶ್ನೆ: ದೇವರುಗಳು ಯಾಕೆ ಸ್ವರ್ಗ ಲೋಕದಲ್ಲಿರ್ತಾರೆ?
ಉತ್ತರ: ತಾವು ಸೃಷ್ಟಿಸಿದವುಗಳಿಗೆ ಹೆದರಿ!

೩) ಪ್ರಶ್ನೆ : ಬ್ಲೂ ಫಿಲಂ ಅಂದ್ರೆ ಯಾವುದು?
ಉತ್ತರ: ಮನೆಮಂದಿಯೆಲ್ಲಾ ಬೇರೆ ಬೇರೆ ಹೊತ್ತಿಗೆ ಕೂತು ನೋಡುವ ಸಿನಿಮಾ!

೫) ಪ್ರಶ್ನೆ : ನಿಜವಾದ ಭಾರತೀಯ ಯಾರು?
ಉತ್ತರ: ರಾಜೀವ ಗಾಂಧಿ.
ಪ್ರಶ್ನೆ: ಯಾಕೆ?
ಉತ್ತರ: 'ಭಾರತೀಯರೆಲ್ಲಾ ನನ್ನ ಸಹೋದರ ಸಹೋದರಿಯರು' ಅನ್ನುವ ಧ್ಯೇಯ ವಾಕ್ಯವನ್ನು ಪಾಲಿಸಿದ ನಾಯಕ ಅವರು, ಆದ್ದರಿಂದಲೇ ವಿದೇಶಿಯಳನ್ನು ಮದುವೆ ಆದ್ರು!

೬) ಪ್ರಶ್ನೆ: ಗಾಂಧೀಜಿ ಸಾಯೋಕೆ ಮುಂಚೆ ಹೇಗಿದ್ರು ಗೊತ್ತಾ?
ಉತ್ತರ: ಜೀವಂತವಾಗಿ ಇದ್ರು!

೭) ಪ್ರಶ್ನೆ: ಲವ್ ಮಾಡಿ ಮದುವೆ ಆಗೋದು ಒಳ್ಳೆದಾ? ಮದುವೆ ಆಗಿ ಲವ್ ಮಾಡೋದು ಒಳ್ಳೆದಾ?
ಉತ್ತರ : ಮದುವೆ ಆಗಿ ಲವ್ ಮಾಡೋದು ಒಳ್ಳೆದು, ಆದ್ರೆ ಹೆಂಡ್ತಿಗೆ ಗೊತ್ತಾಗ್ಬಾರ್ದು ಅಷ್ಟೆ!

೮) ಪ್ರಶ್ನೆ: ಗರ್ಲ್ ಫ್ರೆಂಡ್ ಅಂದ್ರೆ ಯಾರು?
ಉತ್ತರ: ಯಾವಳು ಒಬ್ಬ ಹುಡುಗನನ್ನು ಒಂದೇ ವರ್ಷದೊಳಗಾಗಿ ಸಂಪೂರ್ಣವಾಗಿ ಬದಲಾಯಿಸುತ್ತಾಳೋ ಮತ್ತು ಒಂದು ವರ್ಷದ ನಂತರ 'ನೀನೀಗ ಮೊದಲಿನಂತಿಲ್ಲ, ತುಂಬಾ ಬದ್ಲಾಗಿದ್ದೀಯ... ಐ ಹೇಟ್ ಯು' ಅನ್ನುತ್ತಾಳೋ ಅವಳು!

8 ಕಾಮೆಂಟ್‌(ಗಳು):

ಸಿಮೆಂಟು ಮರಳಿನ ಮಧ್ಯೆ April 1, 2009 at 9:25 AM  

ರಾಕೇಶ್...

ಸಕತ್ ಆಗಿವೆ ಜೋಕುಗಳು...

ಏಳನೇಯ ಜೋಕ್ ಬಹಳ ಇಷ್ಟವಾಯಿತು....
ನನ್ನಾಕೆಗೆ ಹೇಳಿದೆ...
ಗುದ್ದು ಸಿಕ್ಕಿದೆ...

ಹ್ಹಾ...ಹ್ಹಾ....!

ಎಪ್ರಿಲ್ ನಗೆಗೆ ಬಹಲ ಸೂಕ್ತವಾಗಿವೆ...

ರಾಜೀವ್ ಗಾಂಧಿ ಜೋಕೂ ಮಸ್ತ್ ಆಗಿದೆ...

ಮಂದಾರ April 2, 2009 at 1:55 AM  

ಅಣ್ಣೆರೆ ಜೋಕ್ ಒಳ್ಳೆದಿದೆ.

-ಈಶ

ಧರಿತ್ರಿ April 3, 2009 at 3:38 AM  

ಗರ್ಲ್ ಫ್ರೆಂಡ್ ಅಂದ್ರೆ ಹಾಗೋ? ಗೊತ್ತೇ ಇರಲಿಲ್ಲ ಮಾರಾಯ್ರೆ. ಇನ್ನು ಬಾಯ್ ಫ್ರೆಂಡು ಹೆಂಗೋ...
-ಧರಿತ್ರಿ

ಹರೀಶ ಮಾಂಬಾಡಿ April 7, 2009 at 12:04 PM  

laikiddu

S.K Hegde April 17, 2009 at 2:32 AM  

ಪ್ರಿಯ ಕಮ್ಮಾಜೆ ಅವರೇ,
ಗರ್ಲ್ ಪ್ರೆಂಡ್ ಬಗ್ಗೆ ಬರೆದಿರುವ ಜೋಕ್ ತಮ್ಮ ಸ್ವಂತ ಅನುಭವವನ್ನು ಆಧರಿಸಿರುವಂತಿದೆ ಎಂದು ನನ್ನ ಸ್ನೇಹಿತ ಹೇಳುತ್ತಿದ್ದಾನೆ. ನಿಜವೇ? ;)

shivu May 25, 2009 at 9:52 PM  

ರಾಕೇಶ್ ಸರ್,

ರಾಘವ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ.

ಎಲ್ಲರ ಬ್ಲಾಗಿನಲ್ಲಿ[ನನ್ನದು ಸೇರಿದಂತೆ]ಗಂಭೀರವಾದದ್ದು ಓದುತ್ತಿದ್ದ ನನಗೆ ನಿಮ್ಮ ಎರಡು ಸಾಲಿನ ಹಾಸ್ಯಗಳು ಉಲ್ಲಾಸ ತರಿಸಿದವು. ಎಲ್ಲಾ ಜೋಕುಗಳು ತುಂಬಾ ಚೆನ್ನಾಗಿವೆ...

ನಿಮ್ಮ ಬ್ಲಾಗನ್ನು ಲಿಂಕಿಸಿ.ಹಿಂಬಾಲಿಸುತ್ತೇನೆ...ಆಗಾಗ ನಗಬಹುದು...
ಧನ್ಯವಾದಗಳು.

Sudharshan March 9, 2010 at 7:09 AM  

ಜೋಕ್ಸ್ ಸಖತ್ ಆಗಿದೆ......

-ಸುದರ್ಶನ್

Bharath May 22, 2011 at 7:03 AM  

CLASSALLI E HELILVA SIR?